ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದ ಹಂತಕರೇ ಸಚಿವ ರಮಾನಾಥ ರೈ ಕೊಲೆಗೆ ಹೊಂಚು ಹಾಕಿದ್ದರಾ? ಹೀಗೊಂದು ಸಂಗತಿಯನ್ನು ಗೌರಿ ಹತ್ಯೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಆರೋಪಿಗಳು ಹೇಳಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ರಮಾನಾಥ ರೈ ನನಗೆ ಯಾವ ಭಯವೂ ಇಲ್ಲ. ನಾನು ಎಲ್ಲಾ ಧರ್ಮವನ್ನೂ ಗೌರವಿಸುತ್ತೇನೆ. ಎಲ್ಲಾ ದೇವರೂ ಒಬ್ಬನೇ ಎಂದು ನಂಬುವವನು. ಹೀಗಾಗಿ ನನಗೆ ಯಾವ ಭಯವೂ ಇಲ್ಲ