ವಾಷಿಂಗ್ಟನ್ : ಮನೆಯಲ್ಲಿರುವ ಸಾಮಾನ್ಯ ವಸ್ತುಗಳ ಮೇಲೆ ಹಲವು ದಿನಗಳವರೆಗೂ ಮಂಕಿಪಾಕ್ಸ್ ವೈರಸ್ ಉಳಿಯುವ ಸಾಧ್ಯತೆಗಳಿದೆ.ಆದರೆ ಇದರಿಂದ ಸೋಂಕು ಹರಡಬಹುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಯುಎಸ್ ರೋಗ ನಿಯಂತ್ರಣ ಸಂಸ್ಥೆ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ವರದಿ ಹೇಳಿದೆ.ಸಂಸ್ಥೆ ಇದಕ್ಕೆ ವಿಶೇಷ ಅಧ್ಯಯನ ನಡೆಸಿದ್ದು, ಅಧ್ಯಯನಕ್ಕಾಗಿ ಇಬ್ಬರು ಮಂಕಿಪಾಕ್ಸ್ ರೋಗಿಗಳ ಮನೆಯನ್ನು ಬಳಸಿಕೊಳ್ಳಲಾಗಿದೆ. ರೋಗಿಗಳು ದಿನಕ್ಕೆ ಹಲವಾರು ಬಾರಿ ತಮ್ಮ ಕೈಗಳನ್ನು ತೊಳೆದುಕೊಳ್ಳುತ್ತಾರೆ ಮತ್ತು