ಜಿನೇವಾ : ವಿಶ್ವಾದ್ಯಂತ ವೇಗವಾಗಿ ಹಬ್ಬುತ್ತಿರುವ ಮಂಕಿಪಾಕ್ಸ್ ಸೋಂಕು ಇಸ್ರೇಲ್ಗೂ ಕಾಲಿಟ್ಟಿದೆ. ಈ ಮೂಲಕ ಪ್ರಕರಣಗಳ ಸಂಖ್ಯೆ 100ರ ಗಡಿ ದಾಡಿದೆ. ಇದರಿಂದ 13 ದೇಶಗಳಿಗೆ ಮಂಕಿಪಾಕ್ಸ್ ವ್ಯಾಪಿಸಿದಂತಾಗಿದೆ. ಇದು ಜಗತ್ತಿಗೆ ಎಚ್ಚರಿಕೆಯ ಗಂಟೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳಿದೆ.ವಿದೇಶದಿಂದ ಇಸ್ರೇಲ್ಗೆ ಮರಳಿ ಬಂದ ವ್ಯಕ್ತಿಯೊಬ್ಬರಲ್ಲಿ ಸೋಮವಾರ ಸೋಂಕು ದೃಢಪಟ್ಟಿದೆ. ಈ ವ್ಯಕ್ತಿಯನ್ನು ಟೆಲ್ ಅವೀವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಆತನ ಸ್ಥಿತಿ ಕೆಟ್ಟದಾಗಿದೆ ಎಂದು