ಬೆಂಗಳೂರು : ಮಳೆ ಸಮಸ್ಯೆಗಳ ನಡುವೆ ವಿಧಾನಮಂಡಲದ ಮಳೆಗಾಲದ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ. 10 ದಿನ ನಡೆಯುವ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಎಲ್ಲಾ ಸಿದ್ಧತೆ ನಡೆಸಿವೆ.ಮಳೆ ಹೊತ್ತಲ್ಲಿ ಬೆಂಗಳೂರಿನ ನಿರ್ವಹಣೆ, ಪ್ರವಾಹ ಪರಿಹಾರ ವಿತರಣೆಯ ಲೋಪ, ಬ್ರ್ಯಾಂಡ್ ಬೆಂಗಳೂರಿಗೆ ಹೊಡೆತ, 40 ಪರ್ಸೆಂಟ್ ಕಮಿಷನ್, ಪಿಎಸ್ಐ ನೇಮಕಾತಿ ಹಗರಣ, ಹೆಚ್ಚುತ್ತಿರುವ ಕೋಮು ಸಂಘರ್ಷ,ಕಾನೂನು ಸುವ್ಯವಸ್ಥೆ ಕುಸಿತ, ಲಿಂಬಾವಳಿ ದರ್ಪ ಹೀಗೆ ಸಾಲು ಸಾಲು ವಿಚಾರಗಳ ಬಗ್ಗೆ ಪಟ್ಟಿ ಮಾಡಿಕೊಂಡಿರುವ