ಬೆಂಗಳೂರು: ಶತಮಾನದ ಸುದೀರ್ಘ ಖಗ್ರಾಸ ಚಂದ್ರಗ್ರಹಣ ಇಂದು ಸಂಭವಿಸಲಿದ್ದು, ದೇವಾಲಯಗಳಲ್ಲಿ ವಿಶೇಷ ಪೂಜೆ, ಹವನಗಳು ನಡೆಯಲಿವೆ. ಇಂದು ರಾತ್ರಿ 11.45 ರ ನಂತರ ಚಂದ್ರಗ್ರಹಣ ನಡೆಯಲಿದ್ದು, ಬೆಳಿಗ್ಗೆ 4 ಗಂಟೆಯವರೆಗೂ ಗ್ರಹಣ ಕಾಲವಿರುತ್ತದೆ. ಚಂದ್ರ ಕೇಸರಿ ಬಣ್ಣದಲ್ಲಿ ಗೋಚರಿಸುವುದು ಇಂದಿನ ವಿಶೇಷತೆ.ಗ್ರಹಣದ ಪ್ರಯುಕ್ತ ನಾಡಿನ ವಿವಿಧ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಗಳು ನಡೆಯಲಿವೆ. ಇನ್ನು ಕೆಲವೆಡೆ ಪೂಜಾ ಸಮಯದಲ್ಲಿ ಬದಲಾವಣೆಯಾಗಲಿದೆ. ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳದಲ್ಲಿ ಇಂದು ಸಂಜೆ ಬೇಗನೇ ದೇವರ