ಬಹಳ ದಿನಗಳಿಂದ ನಗರದ ಆಟೋ ಚಾಲಕರು ಬಾಡಿಗೆ ದರಗಳನ್ನು ಪರಿಷ್ಕರಿಸುವಂತೆ ಬೆಂಗಳೂರು ನಗರ ಜಿಲ್ಲಾಡಳಿತದ ಮೇಲೆ ಒತ್ತಡ ಹೇರುತ್ತಲೇ ಇದ್ದರು. ಆದರೆ ಅವರ ಮೊರೆಗೆ ಸ್ಪಂದನೆ ಸಿಕ್ಕಿರಲಿಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಕಳೆದ 8 ವರ್ಷಗಳಿಂದ ಆಟೋ ಬಾಡಿಗೆ ದರ ಮಾತ್ರ ಪರಿಷ್ಕರಣೆಗೊಂಡಿರಲಿಲ್ಲ. ಆದರೆ ಜಿಲ್ಲಾಡಳಿತದಿಂದ ಅವರಿಗೆ ಈಗ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಈಗಿನ ಕನಿಷ್ಠ ದರ ರೂ. 25 ಡಿಸೆಂಬರ್ 1ರಿಂದ ಬದಲಾಗಿ ರೂ. 30 ಆಗಲಿದೆ!