ಹೊಸದಿಲ್ಲಿ : ಭಾರತದ ಹೊಸದಿಲ್ಲಿ ಮಾತ್ರವಲ್ಲ ಜಗತ್ತಿನ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ ದಿನೇದಿನೆ ಕುಸಿಯುತ್ತಿದೆ. ಇದರಿಂದ ನಗರವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾದರೆ, ಜಗತ್ತಿನ ಯಾವ ನಗರಗಳಲ್ಲಿ ವಾಯು ಗುಣಮಟ್ಟ ಕುಸಿದಿದೆ? ಅವುಗಳಲ್ಲಿ ಭಾರತದ ನಗರಗಳು ಎಷ್ಟು? ಈ ಕುರಿತ ಮಾಹಿತಿ ಇಲ್ಲಿದೆ. ಭಾರತ, ಚೀನಾ, ಪಾಕ್ನಲ್ಲಿ ಭಾರೀ ಸಮಸ್ಯೆ ಗಾಳಿಯ ಗುಣಮಟ್ಟ ಕಳಪೆ ಇರುವ ಜಗತ್ತಿನ 100 ನಗರಗಳಲ್ಲಿ ಭಾರತ, ಚೀನಾ, ಪಾಕಿಸ್ತಾನದ್ದೇ 94ನಗರಗಳು ಇವೆ