ಚಿಕ್ಕಮಗಳೂರು : ಹದಿನೈದು ದಿನಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ದನಗಳು ಅಪಘಾತಕ್ಕೀಡಾಗಿ ಸಾವನ್ನಪ್ಪಿರುವ ದುರ್ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮೂಡಿಗೆರೆ-ಕೊಟ್ಟಿಗೆಹಾರ ಮಾರ್ಗದಲ್ಲಿ ನಡೆದಿದೆ.ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಬಳಿ ಇಂದು ಕೂಡ ಅಪಘಾತದಿಂದ ಎರಡು ಜಾನುವಾರುಗಳು ಸಾವನ್ನಪ್ಪಿವೆ. ಮೂಡಿಗೆರೆಯಲ್ಲಿ ಹಾದುಹೋಗುವ ವಿಲ್ಲುಪುರಂ-ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅಪಘಾತದಿಂದ ಒಂದು ಅಥವಾ ಎರಡು ಜಾನುವಾರುಗಳು ಸಾವನ್ನಪ್ಪುತ್ತಿವೆ.ಹೀಗೆ ಸಾವನ್ನಪ್ಪುತ್ತಿರುವ ಜಾನುವಾರುಗಳ ಸಂಖ್ಯೆ 15 ದಿನದಲ್ಲಿ 50ಕ್ಕೂ ಹೆಚ್ಚಾಗಿದೆ. ಕೈಮರದಿಂದ ಕೊಟ್ಟಿಗೆಹಾರದವರೆಗೆ ಹಾದುಹೋಗುವ ಹತ್ತಾರು ಹಳ್ಳಿಗಳಲ್ಲಿ