ನವದೆಹಲಿ : ದೇಶದ ಸ್ವಾಮೀಜಿಗಳು ಸ್ಥಳೀಯ ಉತ್ಪನ್ನಗಳನ್ನು ಮಾತ್ರ ಖರೀದಿಸಲು ಜನರಿಗೆ ತಿಳಿಹೇಳಬೇಕೆಂದು ನಾನು ವಿನಂತಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ಹನುಮ ಜಯಂತಿಯಂದು ಗುಜರಾತಿನ ಮೊರ್ಬಿಯಲ್ಲಿ 108 ಅಡಿ ಎತ್ತರದ ಹನುಮಂತನ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ವಿದೇಶಿ ನಿರ್ಮಿತ ವಸ್ತುಗಳು ನಮಗೆ ಉತ್ತಮ ಎನಿಸಬಹುದು.ಆದರೆ ಅದು ನಮ್ಮ ಜನರ ಶ್ರಮಕ್ಕೆ ಪ್ರತೀಕವಾಗಿರುವುದಿಲ್ಲ. ನಮ್ಮ ಮಾತೃಭೂಮಿಯ ಸೊಗಡನ್ನು ಹೊಂದಿರುವುದಿಲ್ಲ ಎಂದು ಅಭಿಪ್ರಾಯಪಟ್ಟರು. ದೇಶದ ಸ್ವಾಮೀಜಿಗಳು ಸ್ಥಳೀಯ ಉತ್ಪನ್ನಗಳನ್ನು ಮಾತ್ರ ಖರೀದಿಸಲು