ನವದೆಹಲಿ : ಭಾರತದಲ್ಲಿ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರಿ ಮಾಡುವ ಮಕ್ಕಳಿಗೆ ಹೆಲ್ಮೆಟ್ ಬಳಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಮಕ್ಕಳ ಗಾತ್ರಕ್ಕೆ ಅನುಗುಣವಾಗಿ ಹೆಲ್ಮೆಟ್ಗಳನ್ನು ತಯಾರಿಸುವಂತೆ ಹೆಲ್ಮೆಟ್ ತಯಾರಕರಿಗೆ ಸರ್ಕಾರ ಸೂಚಿಸಿದೆ. ಹೊಸ ನಿಯಮದ ಪ್ರಕಾರ ಉಲ್ಲಂಘನೆಗೆ 1,000 ರೂ. ದಂಡ ಮತ್ತು 3 ತಿಂಗಳ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ.ಹೊಸ ನಿಯಮಗಳನ್ನು ಕೇಂದ್ರ ಮೋಟಾರು ವಾಹನಗಳ ನಿಯಮಗಳ ಅಡಿಯಲ್ಲಿ 1989ರ ತಿದ್ದುಪಡಿಯ ಮೂಲಕ ಪ್ರಸ್ತಾಪಿಸಲಾಗಿದೆ. ಪ್ರಸ್ತಾವಣೆಯು ನಾಲ್ಕು ವರ್ಷ