ಚಿಕ್ಕಮಗಳೂರು : ಹಿಂದೂಯೇತರ ವರ್ತಕರಿಗೆ ನಿರ್ಬಂಧ ಹಾಕಬೇಕು ಎಂಬ ಕೂಗಿನ ಮಧ್ಯೆಯೇ ಈಗ ಆಪರೇಷನ್ `ಮೈಕ್’ ಅಭಿಯಾನ ಶುರುವಾಗಿದೆ.ಚಿಕ್ಕಮಗಳೂರಿನ 13 ವಾರ್ಡ್ಗಳಲ್ಲಿರುವ ಪ್ರಾರ್ಥನಾ ಮಂದಿರ, ಚರ್ಚ್, ಮಸೀದಿಗಳ ಅನಧಿಕೃತ ಮೈಕ್ಗಳ ತೆರವಿಗೆ ನಗರಸಭೆ ನಿರ್ಧರಿಸಿದೆ.ಹಿಂದೂ-ಮುಸ್ಲಿಂ-ಕ್ರೈಸ್ತ ಸೇರಿದಂತೆ ಯಾವುದೇ ಧರ್ಮದ ಪ್ರಾರ್ಥನ ಮಂದಿರಗಳ ಮೇಲೆ ಅಕ್ರಮವಾಗಿ ಹಾಕಿರುವ ಮೈಕ್ಗಳನ್ನು ತೆರವುಗೊಳಿಸಲು ಚಿಕ್ಕಮಗಳೂರು ನಗರಸಭೆ ಮುಂದಾಗಿದೆ.ಮೂರು ವರ್ಷಗಳ ಬಳಿಕ ನಡೆದ ಚಿಕ್ಕಮಗಳೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರಿದ ಚುಕ್ಕಾಣಿ ಹಿಡಿದಿತ್ತು.