ಬೆಂಗಳೂರು : ಆನೇಕಲ್ ವಿಧಾನಸಭಾ ಕ್ಷೇತ್ರದ ಎರಡು ಪುರಸಭೆ ಮತ್ತು ಒಂದು ನಗರಸಭೆ ಚುನಾವಣೆಯ ಫಲಿತಾಂಶ ಗುರುವಾರ (ಡಿ 30) ಪ್ರಕಟವಾಗಲಿದೆ. ಚಂದಾಪುರ ಮತ್ತು ಜಿಗಣಿ ಪುರಸಭೆ ಹಾಗೂ ಹೆಬ್ಬಗೋಡಿ ನಗರಸಭೆಯ ಮತಎಣಿಕೆ ನಡೆಯಲಿದ್ದು, ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ. 23 ಸದಸ್ಯ ಬಲದ ಜಿಗಣಿ ಪುರಸಭೆಯಲ್ಲಿ ಕಳೆದ ಬಾರಿ ಬಿಜೆಪಿ 15, ಕಾಂಗ್ರೆಸ್ 5, ಜೆಡಿಎಸ್ 2, ಪಕ್ಷೇತರರು 1 ಸ್ಥಾನ ಗೆದ್ದಿದ್ದರು.ಬಿಜೆಪಿಯೇ ಆಡಳಿತ ನಡೆಸಿತ್ತು.