ಜಾತಕದಲ್ಲಿ ದೋಷವಿದೆ ಎಂದು ಹೇಳಿ ನಾದಿನಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ

ನವದೆಹಲಿ| pavithra| Last Modified ಗುರುವಾರ, 4 ಅಕ್ಟೋಬರ್ 2018 (07:54 IST)
ನವದೆಹಲಿ : ಜಾತಕದಲ್ಲಿ ದೋಷವಿದೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ನಾದಿನಿಯ ಮೇಲೆ ಸತತ ನಾಲ್ಕು ವರ್ಷಗಳ ಕಾಲದಿಂದ ಎಸಗಿದ ಘಟನೆ ನವದೆಹಲಿಯಲ್ಲಿ ನಡೆದಿದೆ.


ವ್ಯಕ್ತಿಯೊಬ್ಬ ತನ್ನ 23 ವರ್ಷದ ನಾದಿನಿಯ ಮೇಲಿರುವ ಕೆಟ್ಟ ಆಸೆಯಿಂದ ನಿನ್ನ ಜಾತಕದಲ್ಲಿ ದೋಷವಿದೆ. ಆ ದೋಷ ನಿವಾರಣೆ ಮಾಡಕೊಳ್ಳದಿದ್ದರೇ ನಿಮ್ಮ ತಂದೆ ಸಾಯುತ್ತಾನೆ ಎಂದು ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಆತನ ಮೋಸವನ್ನು ಅರಿಯದ ನಾದಿನಿ ತನ್ನ ತಂದೆಯ ಮೇಲಿನ ಪ್ರೀತಿಗೆ ದೋಷ ನಿವಾರಣೆಗೆ ಮುಂದಾಗಿ ಆತನಿಂದ ಸತತ ನಾಲ್ಕು ವರ್ಷಗಳ ಕಾಲ ಅತ್ಯಾಚಾರಕ್ಕೊಳಗಾಗಿದ್ದಾಳೆ.


ಯುವತಿಗೆ ಮದುವೆಯಾದ ನಂತರವೂ
ಆತನ ಕಾಟ ಹೆಚ್ಚಾದ ಕಾರಣ ಆಕೆ ನಡೆದ ಸಂಗತಿಯನ್ನು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಕೂಡಲೇ ಸಂಬಂಧಿಕರು ಆತನ ವಿರುದ್ಧ ದೂರು ಸಲ್ಲಿಸಿದ್ದು, ಇದೀಗ ಆತನನ್ನು ಬಂಧಿಸಿದ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :