ಉಡುಪಿ : ಉಪಚುನಾವಣೆ ಪ್ರಚಾರ ಸಂದರ್ಭದಲ್ಲಿ ನಾನು ಸಾಯುತ್ತೇನೆ ಎಂದು ಹೇಳಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಇದೀಗ ಸಂಸದ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ. ಉಡುಪಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಪ್ರಚಾರ ಸಂದರ್ಭದಲ್ಲಿ ನಾನು ಸಾಯುತ್ತೇನೆ ಅಂತ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. ಸಾಯುತ್ತೇನೆ ಅಂದರೆ ಸರ್ಕಾರ ಸಾಯುತ್ತೆ ಹಾಗೂ ಅಧಿಕಾರ ಕಳೆದುಕೊಳ್ಳುತ್ತೇನೆ ಅಂಥ ಅರ್ಥ. ಜನರಲ್ಲಿ ಸಿಂಪಥಿ ಕ್ರಿಯೇಟ್ ಮಾಡಿಯಾದ್ರೂ ಸರ್ಕಾರ ಉಳಿಸುವ ಪ್ರಯತ್ನ ಅವರದ್ದು ಎಂದು