ಮೈಸೂರು, ಸೆ. 29 : ದಸರಾ ಮಹೋತ್ಸವದ ದೀಪಾಲಂಕಾರದಲ್ಲಿ ಈ ಬಾರಿ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರ ಪ್ರತಿಕೃತಿ ವಿಶೇಷ ಗಮನ ಸೆಳೆಯಲಿದೆ. ದಸರಾ ವೇಳೆ ದೀಪಾಲಂಕಾರವನ್ನು ಆಕರ್ಷಣೀಯವಾಗಿಸಲು 100 ಕಿ.ಮೀ.ನಷ್ಟು ರಸ್ತೆ, ವೃತ್ತಗಳನ್ನು ವಿದ್ಯುತ್ ದೀಪಾಲಂಕಾರಗೊಳಿಸಲಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಬಾರಿ 60 ಕಿ.ಮೀ.ನಷ್ಟು ದೀಪಾಲಂಕಾರ ಮಾಡಲಾಗಿತ್ತು. ಈ ಬಾರಿ ಸೋಂಕು ಇಳಿಮುಖವಾಗಿರುವುದರಿಂದ ನಗರ ವ್ಯಾಪ್ತಿಯ ಸುಮಾರು 100 ಕಿ.ಮೀ. ದೀಪಾಲಂಕಾರ ಮಾಡಲು ಸರಕಾರ ನಿರ್ಧರಿಸಿದೆ.