ನವದೆಹಲಿ : ದೇಶದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ದಾಖಲಾದ ಬಳಿಕ ಇದೀಗ ಕೇಂದ್ರ ಆರೋಗ್ಯ ಇಲಾಖೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನೂತನ ಗೈಡ್ಲೈನ್ ಬಿಡುಗಡೆ ಮಾಡಿದೆ. ವಿದೇಶದಿಂದ ಆಗಮಿಸಿದ್ದ ಕೇರಳದ ಕೊಲ್ಲಂನ ವ್ಯಕ್ತಿಯೋರ್ವನಿಗೆ ನಿನ್ನೆ ಮಂಕಿಪಾಕ್ಸ್ ಸೋಂಕಿರುವುದು ದೃಢವಾಗಿತ್ತು. ಆ ಬಳಿಕ ಇದೀಗ ವಿದೇಶದಿಂದ ವಿಮಾನದಲ್ಲಿ ಆಗಮಿಸುವ ಪ್ರಯಾಣಿಕರ ಮೇಲೆ ಕೇಂದ್ರ ಆರೋಗ್ಯ ಇಲಾಖೆ ನಿಗಾ ವಹಿಸಲು ಮುಂದಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರು ಅನಾರೋಗ್ಯವಿರುವ ಜನರೊಂದಿಗೆ ನಿಕಟ ಸಂಪರ್ಕ ಹೊಂದಿರಬಾರದು. ಇಲಿಗಳು, ಅಳಿಲುಗಳು,