ದೇಶದಲ್ಲಿ ಇಂದು ಮತ್ತೊಂದು ಹಂತದ ಕೊವಿಡ್ 19 ಲಸಿಕೆ ಅಭಿಯಾನ ಶುರುವಾಗುತ್ತಿದೆ.15-18ವರ್ಷದವರಿಗೆ ಇಂದಿನಿಂದ ಕೊವ್ಯಾಕ್ಸಿನ್ ಲಸಿಕೆ ನೀಡಲು ದೇಶಾದ್ಯಂತ ಸಿದ್ಧತೆಗಳು ನಡೆದಿವೆ. ಜ.1ರಿಂದಲೇ ಕೊವಿನ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು.ಹೀಗಾಗಿ ಭಾನುವಾರ ಸಂಜೆ ಹೊತ್ತಿಗೆ ಕೊವಿಡ್ 19 ಲಸಿಕೆಗಾಗಿ ಕೊವಿನ್ ಆ್ಯಪ್ನಲ್ಲಿ 6.35 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ವಯಸ್ಸಿನವರಿಗೆ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆ ಮಾತ್ರ ನೀಡಲಾಗುತ್ತದೆ.ಯಾಕೆಂದರೆ 15-18 ವಯಸ್ಸಿನವರಿಗೆ ತುರ್ತು ಬಳಕೆಗೆ ಕೊವ್ಯಾಕ್ಸಿನ್ ಬಿಟ್ಟು