ಬೆಂಗಳೂರು : ಕೋವಿಡ್ ಮಹಾಮಾರಿ ವಕ್ಕರಿಸಿದ ಬಳಿಕ ನಗರದಲ್ಲಿ ಬಿಎಂಟಿಸಿ ಬಸ್ಸುಗಳ ರಾತ್ರಿ ಸೇವೆ ಸ್ಥಗಿತಗೊಂಡಿತ್ತು. ಇದೀಗ ಎರಡು ವರ್ಷಗಳ ಬಳಿಕ ನೈಟ್ ಸರ್ವಿಸ್ ಪುನಾರಂಭಗೊಂಡಿದೆ. ನಿನ್ನೆ ರಾತ್ರಿಯಿಂದಲೇ ಬಸ್ಸುಗಳ ರಾತ್ರಿ ಸಂಚಾರ ಆರಂಭವಾಗಿದೆ. ದಿನ ನಿತ್ಯ ರಾತ್ರಿ 11:30ರಿಂದ ಬೆಳಗ್ಗೆ 5 ಗಂಟೆಯವರೆಗೆ ರಾಜಧಾನಿ ನಗರಿಯಲ್ಲಿ ಬಸ್ಸುಗಳ ಸೇವೆ ಲಭ್ಯ ಇದೆ. ಅಂದರೆ ಬಿಎಂಟಿಸಿ ಬಸ್ಸುಗಳು ದಿನವಿಡೀ 24 ಗಂಟೆಯೂ ಪ್ರಯಾಣಿಕರಿಗೆ ಲಭ್ಯ ಇರಲಿವೆ. ನಿನ್ನೆ ಬಿಎಂಟಿಸಿ ನೈಟ್