ಬೆಂಗಳೂರು : ಕೊವಿಡ್ 19 ಕಾರಣದಿಂದಾಗಿ ಬಿಎಂಟಿಸಿ ರಾತ್ರಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಸುಮಾರು 20 ತಿಂಗಳಿನಿಂದ ರಾತ್ರಿ ಬಿಎಂಟಿಸಿ ಬಸ್ ಸೇವೆ ಲಭ್ಯವಿರಲಿಲ್ಲ. ಇದೀಗ ಕೊರೊನಾ ಸಾಂಕ್ರಾಮಿಕ ಇಳಿಕೆ ಆಗಿರುವ ಸಂದರ್ಭದಲ್ಲಿ ಮತ್ತೆ ಬಿಎಂಟಿಸಿ ರಾತ್ರಿ ಬಸ್ ಸೇವೆಯನ್ನು ಪುನಾರಂಭಿಸಲಾಗಿದೆ. ಭಾನುವಾರದಿಂದ ರಾತ್ರಿ ಬಸ್ ಸಂಚಾರ ಮತ್ತೆ ಆರಂಭವಾಗಿದೆ. ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ ವಿಧಿಸಿದ್ದ ರಾತ್ರಿ ಕರ್ಫ್ಯೂ ಆದೇಶ ಹಿಂತೆಗೆದುಕೊಂಡಿತ್ತು. ಸುಮಾರು 70 ಬಿಎಂಟಿಸಿ ಬಸ್ಗಳು ಬೆಂಗಳೂರು ನಗರದಲ್ಲಿ