ತಿರುಪತಿ : ತಮಿಳುನಾಡು, ಆಂಧ್ರದ ರಾಯಲಸೀಮೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಮತ್ತೊಮ್ಮೆ ತಿರುಮಲ ಘಾಟ್ನಲ್ಲಿ ಬೃಹತ್ ಬಂಡೆ ಉರುಳಿದೆ. ಅತೀವೃಷ್ಠಿಯ ಪರಿಣಾಮ ತಿರುಪತಿಯಿಂದ ತಿರುಮಲಕ್ಕೆ ತೆರಳುವ ಘಾಟ್ ರಸ್ತೆ ಮೇಲೆ ಬೃಹತ್ ಬಂಡೆ ಕಲ್ಲುಗಳು ಉರುಳಿ ಬಿದ್ದಿದೆ. ಇದರಿಂದಾಗಿ ರಸ್ತೆ ಸಂಪೂರ್ಣವಾಗಿ ಹಾನಿಯಾಗಿದ್ದು, ತಾತ್ಕಾಲಿಕವಾಗಿ ತಿರುಪತಿ ತಿಮ್ಮಪ್ಪನ ದರ್ಶನ ರದ್ದು ಮಾಡಲಾಗಿದೆ. ತಿರುಮಲಕ್ಕೆ ತೆರಳುವ 2ನೇ ಘಾಟ್ದ ರಸ್ತೆಯಲ್ಲಿ ಎಂದರೆ ತಿಮ್ಮಪ್ಪನ ದೇಗುಲದಿಂದ ಸುಮಾರು 16 ಕಿ.ಮೀ ದೂರದಲ್ಲಿ ಭೂಕುಸಿತ