ಕೋವಿಡ್ ಎರಡನೇ ಅಲೆ ತಗ್ಗಿದೆ ಎಂದು ಸಮಾಧಾನ ಪಟ್ಟುಕೊಳ್ಳುತ್ತಿರುವಾಗಲೇ ದಕ್ಷಿಣ ಆಫ್ರಿಕಾದ ಕೋವಿಡ್ ರೂಪಾಂತರ ತಳಿ ಕೋವಿಡ್ 19 Omicron ಜಗತ್ತಿನೆಲ್ಲೆಡ ಆತಂಕ ಮೂಡಿಸಿದೆ. ಲಸಿಕೆಗೂ ಬಗ್ಗದ ಈ ಸೋಂಕು ಬಹುಬೇಗ ಹರಡುತ್ತಿರುವುದು ಹೆಚ್ಚಿನ ಭೀತಿ ಉಂಟು ಮಾಡಿದೆ. ಈಗಾಗಲೇ ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಸೋಂಕು ಕಂಡು ಬಂದಿದ್ದು, ದೇಶದಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಸುಮಾರು ಎರಡು ವರ್ಷಗಳ ನಂತರ ಪ್ರಯಾಣ ನಿಷೇಧವನ್ನು ತೆಗೆಯುತ್ತಿರುವ ದೇಶಗಳು ಈಗ ಮತ್ತೊಮ್ಮೆ ಈ ನಿರ್ಧಾರವನ್ನು