ನವದೆಹಲಿ : ದೇಶಾದ್ಯಂತ ಟೊಮೆಟೋ ದರದಲ್ಲಿ ಏರಿಕೆ ಕಂಡುಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಬೆಲೆ ಏರಿಕೆಗೆ ಮೂಗುದಾರ ಹಾಕಲು ಮುಂದಾಗಿದೆ. ಹೌದು. ಕಳೆದ ಒಂದು ತಿಂಗಳಿಂದ ಟೊಮೆಟೋ ದರ ಗಗನಕ್ಕೇರಿದೆ. ಇದೀಗ ದರ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕರ್ನಾಟಕ, ಮಹಾರಾಷ್ಟ್ರ, ಆಂಧ್ರದ ಮಂಡಿಗಳಿಂದ ಟೊಮೆಟೋ ಖರೀದಿಸಿ ಸಾರ್ವಜನಿಕ ಬಳಕೆಗೆ ವಿತರಣೆ ಮಾಡುವಂತೆ ಸಹಕಾರಿ ಸಂಸ್ಥೆಗಳಾದ ನಾಫೆಡ್ ಮತ್ತು ಎನ್ಸಿಸಿಎಫ್ಗೆ ನಿರ್ದೇಶನ ನೀಡಿದೆ. ಟೊಮೆಟೋ ಬೆಲೆ ಹೆಚ್ಚಳವಿರುವ