ನವದೆಹಲಿ : ವರ್ಚ್ಯುಯಲ್ ಪ್ರೈವೆಟ್ ಸರ್ವರ್ (ವಿಪಿಎಸ್) ಬಳಕೆ ಮಾಡಿ ಆನ್ ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವವರಿಗೆ ಇನ್ನು ಮುಂದಿನ ದಿನಗಳಲ್ಲಿ ರೈಲು ಟಿಕೆಟ್ ಬುಕ್ಕಿಂಗ್ ಸಾಧ್ಯವಾಗುವುದಿಲ್ಲ. ಆನ್ ಲೈನ್ ಟಿಕೆಟ್ ಗಳನ್ನು ಖರೀದಿಸುವುದಕ್ಕೆ ಅಕ್ರಮವಾಗಿ ಸಾಫ್ಟ್ ವೇರ್ ಬಳಕೆ ಮಾಡಲಾಗುತ್ತಿರುವುದನ್ನು ನಿರಂತರವಾಗಿ ಗಮನಿಸುತ್ತಿದ್ದ ರೈಲ್ವೆ ಸಚಿವಾಲಯ ಟಿಕೆಟ್ ಬುಕ್ ಮಾಡುವವರು ವಿಪಿಎಸ್ ಮೂಲಕ ಐಪಿಯನ್ನು ಗೌಪ್ಯವಾಗಿರಿಸಿ ಟಿಕೆಟ್ ಕಾಯ್ದಿರಿಸುತ್ತಿದ್ದರು. ಈ ಮೂಲಕ ನೈಜ ಲೊಕೇಷನ್ ಗಳ ಪತ್ತೆ ಕಷ್ಟಸಾಧ್ಯವಾಗುತ್ತಿತ್ತು.