ಬೆಂಗಳೂರು : ಒಂದು ವರ್ಷದ ಶಾಲಾ ಶುಲ್ಕ ಕಟ್ಟುವುದರಲ್ಲೇ ಪೋಷಕರು ಹೈರಾಣಾಗುತ್ತಾರೆ. ಅಂತಹದರಲ್ಲಿ ಖಾಸಗಿ ಶಾಲೆಗಳು ಈಗಲೇ 10 ವರ್ಷದ ಮುಂಗಡ ಶುಲ್ಕ ಕಟ್ಟಲು ಆಫರ್ ನೀಡಿದೆ.ಹೌದು.. ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿ 10 ವರ್ಷದ ಶುಲ್ಕವನ್ನು ಮುಂಗಡವಾಗಿ ಕಟ್ಟಬಹುದು. ಇದು ಕಡ್ಡಾಯವಲ್ಲ. ಆದರೆ ಇಷ್ಟವಿದ್ದ ಪೋಷಕರು ಇದನ್ನು ಕಟ್ಟಬಹುದು. 10 ವರ್ಷಕ್ಕೆ 20 ಲಕ್ಷ ರೂ. ಕಟ್ಟಿ ಅಡ್ವಾನ್ಸ್ ಫೀಸ್ ಕಟ್ಟಬಹುದು.1 ರಿಂದ 10ನೇ ತರಗತಿಯವರೆಗೆ ಮುಂಗಡವಾಗಿ ದಾಖಲಾತಿ ಮಾಡಿಸಬಹುದು.