ಜಿನೆವಾ : ಭಾರತದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಏರಿಳಿತ ಕಂಡುಬರುತ್ತಿರುವಾಗಲೇ,ಒಮಿಕ್ರೋನ್ ತಳಿಯ ಬಿಎ.2.75 ಎಂಬ ಹೊಸ ಉಪತಳಿಯೊಂದು ಭಾರತದಲ್ಲಿ ಪತ್ತೆಯಾಗಿದೆ ಹಾಗೂ ಇದು ಸುಮಾರು 10 ದೇಶಗಳಿಗೆ ಹಬ್ಬಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಎಚ್ಚರಿಕೆಯ ಗಂಟೆ ಮೊಳಗಿಸಿದೆ.‘ಯುರೋಪ್ ಹಾಗೂ ಅಮೆರಿಕದಲ್ಲಿ ಬಿಎ.4 ಮತ್ತು ಬಿಎ.5 ಉಪತಳಿಗಳಿಂದ ಸೋಂಕು ಪ್ರಕರಣಗಳ ಉಬ್ಬರ ಕಂಡುಬಂದಿದೆ.ಭಾರತದಂತಹ ದೇಶಗಳಲ್ಲಿ ಬಿಎ.2.75 ಉಪತಳಿ ಪತ್ತೆಯಾಗಿದ್ದು, ಅದರ ಮೇಲೆ ನಿಗಾ ಇಟ್ಟಿದ್ದೇವೆ’ ಎಂದು ಡಬ್ಲ್ಯುಎಚ್ಒ ಮಹಾನಿರ್ದೇಶಕ