ಭಾರತದಲ್ಲಿ ಒಮಿಕ್ರಾನ್ ಕೇಸ್ 10 ಲಕ್ಷಕ್ಕೇರುವ ಸಾಧ್ಯತೆ ಇದೆ. ಇದನ್ನು ನಿಯಂತ್ರಿಸಲು ನಮಗೆ ತಿಂಗಳ ಸಮಯವೂ ಇಲ್ಲ ಎಂದು ಕೇರಳದ ಕೊವಿಡ್ ತಜ್ಞರ ಸಮಿತಿ ಸದಸ್ಯ ಡಾ.ಅನೀಶ್ ಹೇಳಿದ್ದಾರೆ. ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘‘ತಿಂಗಳ ಅವಧಿಯಲ್ಲೇ ಒಮಿಕ್ರಾನ್ ನಿಯಂತ್ರಣಕ್ಕೆ ಕ್ರಮ ಅಗತ್ಯ. ಅದಕ್ಕಿಂತ ಹೆಚ್ಚು ಸಮಯ ನಮ್ಮ ಬಳಿಯಿಲ್ಲ’’ ಎಂದು ನುಡಿದಿದ್ದಾರೆ.ವಿಶ್ವದಲ್ಲಿ ದಿನೇದಿನೆ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದೇ ಸಂಖ್ಯೆ ಆಧರಿಸಿ ನೋಡುವುದಾದರೆ ನಮ್ಮಲ್ಲೂ ರೂಪಾಂತರಿ