ನವದೆಹಲಿ : ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಒಂದೇ ದಿನದಲ್ಲಿ 17 ಹೊಸ ಪ್ರಕರಣ ಪತ್ತೆಯಾಗುವ ಮೂಲಕ ದೇಶದಲ್ಲಿ ಓಮಿಕ್ರಾನ್ ಕೇಸ್ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ರಾಜಸ್ಥಾನದ ಜೈಪುರದಲ್ಲಿ 9, ಮಹಾರಾಷ್ಟ್ರದಲ್ಲಿ 7 ಮಂದಿಯಲ್ಲಿ ಹೊಸ ರೂಪಾಂತರ ಸೋಂಕು ಪತ್ತೆಯಾಗಿದೆ. ಈ ಪ್ರಕರಣಗಳು ವರದಿಯಾದ ಬೆನ್ನಲ್ಲೆ ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಭಾನುವಾರ 21ಕ್ಕೆ ಏರಿಕೆ ಕಂಡಿದೆ. ಹೊಸ ರೂಪಾಂತರ ಸೋಂಕು ಪತ್ತೆಯಾದವರು ಹೆಚ್ಚು ಕೇಸ್