ದೆಹಲಿಯಲ್ಲಿ ಸೋಂಕು ಉಲ್ಬಣಕ್ಕೆ ಕಾರಣವಾದ ಒಮಿಕ್ರೋನ್ನ 2 ಹೊಸ ಉಪತಳಿಗಳು ಬೆಂಗಳೂರಿನಲ್ಲೂ ಪತ್ತೆಯಾಗಿವೆ. ಬೆಂಗಳೂರಿನ ಮೂಲದ ಇಬ್ಬರು ಸೋಂಕಿತರಲ್ಲಿ ‘ಬಿಎ.2’ ವಿಭಾಗಕ್ಕೆ ಸೇರುವ ‘ಬಿಎ.2.10’ ಹಾಗೂ ‘ಬಿಎ.2.12’ ಎಂಬ ಒಮಿಕ್ರೋನ್ ಉಪತಳಿಗಳು ದೃಢಪಟ್ಟಿವೆ ಎಂದು ತಿಳಿದು ಬಂದಿದೆ.ಆದರೆ, ಎರಡೂ ಉಪತಳಿಗಳ ಪತ್ತೆಯನ್ನು ಆರೋಗ್ಯ ಇಲಾಖೆ ಅಧಿಕೃತವಾಗಿ ಖಚಿತಪಡಿಸಿಲ್ಲ. ಈ ನಡುವೆ, ರಾಜ್ಯದಲ್ಲಿ ಸದ್ಯದಲ್ಲೇ 4ನೇ ಅಲೆ ಏಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.ಖಾಸಗಿ ಪ್ರಯೋಗಾಲಯದ ಮೂಲಗಳ ಪ್ರಕಾರ