ಬರ್ನ್ : ಓಮಿಕ್ರಾನ್ ಉಪ-ರೂಪಾಂತರಿ ಬಿಎ.2 ಇಲ್ಲಿಯವರೆಗೆ ವಿಶ್ವದ 57 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್ಒ) ತಿಳಿಸಿದೆ.ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ಮೂಲ ಆವೃತ್ತಿಗಿಂತಲೂ ಬಿಎ.2 ಅತ್ಯಂತ ವೇಗದಲ್ಲಿ ಹರಡಬಲ್ಲ ಸಾಂಕ್ರಾಮಿಕ ರೋಗವಾಗಿದೆ. ಈಗಾಗಲೇ ಇದು ವಿಶ್ವದ 57 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ತಿಳಿಸಿದೆ. 10 ವಾರಗಳ ಹಿಂದೆಯಷ್ಟೇ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಓಮಿಕ್ರಾನ್ ಅತ್ಯಂತ ವೇಗವಾಗಿ ಹರಡಿರುವ ಕೊರೊನಾ ರೂಪಾಂತರಿಗಳಲ್ಲಿ