ಬೆಂಗಳೂರು : ರಾಜ್ಯದಲ್ಲಿ ಕೊರೋನಾ ರೂಪಾಂತರಿ ಒಮಿಕ್ರೋನ್ನ ಉಪತಳಿಗಳಾದ ಬಿಎ3, ಬಿಎ4 ಹಾಗೂ ಬಿಎ 5 ಪತ್ತೆಯಾಗಿದ್ದು, ಕಳೆದ ಒಂದು ತಿಂಗಳಿಂದ ಕೊರೋನಾ ಹೊಸ ಪ್ರಕರಣಗಳು ಹೆಚ್ಚಳಕ್ಕೆ ಈ ಉಪತಳಿಗಳು ಕೂಡ ಕಾರಣ ಎಂದು ತಜ್ಞರು ತಿಳಿಸಿದ್ದಾರೆ.ಸದ್ಯ ನಾಲ್ಕನೇ ಅಲೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಹೊಸ ರೂಪಾಂತರಿಗಳು ಮತ್ತು ಅದರ ಉಪತಳಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವಂಶವಾಹಿ (ಜಿನೋಮಿಕ್ ಸೀಕ್ವೆನ್ಸ್) ಪರೀಕ್ಷೆಗಳನ್ನು ನಿರಂತರವಾಗಿ ನಡೆಸುತ್ತಿದೆ.ಮೇ ಮತ್ತು ಜೂನ್ನಲ್ಲಿ