ಲಂಡನ್ : ವಿಶ್ವಾದ್ಯಂತ ಓಮಿಕ್ರಾನ್ ಅಟ್ಟಹಾಸದಿಂದ ಮೆರೆಯುತ್ತಿದ್ದು, ಜಗತ್ತಿನಲ್ಲಿಯೇ ಕೊರೊನಾ ಹೊಸ ರೂಪಾಂತರಿ ತಳಿ ಓಮಿಕ್ರಾನ್ಗೆ ಬ್ರಿಟನ್ನಲ್ಲಿ ಮೊದಲ ಸೋಂಕಿತ ಬಲಿಯಾಗಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿದ ಬ್ರಿಟನ್ ಪ್ರಧಾನಿ ಬೋರಿನ್ ಜಾನ್ಸನ್, ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಓಮಿಕ್ರಾನ್ ಸೋಂಕಿಗೆ ವ್ಯಕ್ತಿ ಒಬ್ಬರು ಬಲಿಯಾಗಿರುವುದು ಬಹಳ ದುಃಖಕರವಾದ ವಿಚಾರ.ಓಮಿಕ್ರಾನ್ ತಡೆಯಲು ದೇಶದಲ್ಲಿ ಮಹತ್ವಾಕಾಂಕ್ಷೆಯ ಕೋವಿಡ್ ಬೂಸ್ಟರ್ ಡೋಸ್ ಅಗತ್ಯವಿದೆ. ಹೀಗಾಗಿ ಇಂಗ್ಲೆಂಡ್ನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್