ನವದೆಹಲಿ : ಪ್ರತಿ ಪ್ರಯಾಣಿಕರ ಸಮಯವು ಅಮೂಲ್ಯವಾದುದು ಎಂದಿರುವ ಸುಪ್ರೀಂ ಕೋರ್ಟ್, ತನ್ನ ನಿಯಂತ್ರಣ ಮೀರಿ ರೈಲು ವಿಳಂಬವಾಗಿದೆ ಎಂದು ಸಾಬೀತುಪಡಿಸದ ಹೊರತು 'ವಿಳಂಬ ಮತ್ತು ತಡವಾಗಿ ಬರುವುದಕ್ಕೆ' ಪ್ರಯಾಣಿಕರಿಗೆ ಪರಿಹಾರ ನೀಡಬೇಕು ಎಂದು ಬುಧವಾರ ಮಹತ್ವದ ಆದೇಶ ಹೊರಡಿಸಿದೆ.