ಬೆಂಗಳೂರು : ಶನಿವಾರ ಸಂಜೆ ಆಗುತ್ತಿದ್ದಂತೆ ಸಣ್ಣಗೆ ಶುರುವಾಗಿದ್ದ ಮಳೆ, ರಾತ್ರಿ ಆಗುತ್ತಿದ್ದಂತೆ ಅಬ್ಬರಿಸಿತು.ಏಕಾಏಕಿ ಶುರುವಾದ ಮಳೆಗೆ ವಾಹನ ಸವಾರರು ತತ್ತರಿಸಿದ್ರು.. ಕ್ಷಣಮಾತ್ರದಲ್ಲಿ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ನಿಂತು ಸಂಚಾರಕ್ಕೆ ಅಡ್ಡಿಯುಂಟು ಮಾಡಿತ್ತು.ಮೆಜೆಸ್ಟಿಕ್, ಕಾರ್ಪೊರೇಷನ್, ಮಾರ್ಕೆಟ್, ವಿಧಾನಸೌಧ, ಜಯನಗರ 2ನೇ ಹಂತ, ಕುಮಾರಸ್ವಾಮಿ ಲೇಔಟ್, ಶೇಷಾದ್ರಿಪುರಂ, ಮಲ್ಲೇಶ್ವರಂ, ಯಶವಂತಪುರ, ರಾಜಾಜಿನಗರ, ಮಹಾಲಕ್ಷ್ಮಿಲೇಔಟ್, ಇಸ್ಕಾನ್ ಟೆಂಪಲ್ ರಸ್ತೆ ಸೇರಿದಂತೆ ಹಲವೆಡೆ ಭಾರೀ ಮಳೆ ಸುರಿಯಿತು. ರಸ್ತೆಗಳಲ್ಲಿ ನೀರು ನಿಂತು ಸವಾರರು ಪರದಾಡಿದ್ರು.ಆನಂದ್