ಒಂದೆಡೆ ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಬ್ಯಾರೆಲ್ಗೆ 105 ಡಾಲರ್ ಮುಟ್ಟಿದೆ.ಇತ್ತ ಭಾರತದಲ್ಲಿ ಮಧ್ಯಮವರ್ಗದ ಜನರಿಗೆ ಪೆಟ್ರೋಲ್ - ಡೀಸೆಲ್ ಖರೀದಿ ಮಾಡುವುದೂ ಕಷ್ಟ ಎನ್ನುವ ಕಾಲ ಸನ್ನಿಹಿತವಾಗಿದೆ.ಪೆಟ್ರೋಲ್ ಬೆಲೆ 100ರ ಗಡಿದಾಟಿ 110 ರೂಪಾಯಿಗಳನ್ನೂ ಮುಟ್ಟಿದೆ. ಡೀಸೆಲ್ ದರ ಕೂಡ ಇನ್ನೇನು ರೂ. 100 ಮುಟ್ಟಲು ಸಿದ್ಧವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿದಂತೆಲ್ಲಾ ಎಲ್ಲಾ ವಸ್ತುಗಳ ಬೆಲೆಯೂ ಏರಿಕೆಯಾಗುತ್ತವೆ.ಇದರಿಂದ ಸಾಮಾನ್ಯ ಬಡ ಮತ್ತು ಮಧ್ಯಮವರ್ಗದ ಜನರ ಜೀವನ ದುಸ್ಥರವಾಗುತ್ತದೆ.