ನವದೆಹಲಿ: ಇಂದು ಪ್ರಧಾನಿ ಮೋದಿಗೆ 68 ವರ್ಷದ ಹುಟ್ಟು ಹಬ್ಬದ ಸಂಭ್ರಮ. ಈ ದಿನವನ್ನು ಅವರು ತಮ್ಮ ತವರು ರಾಜ್ಯ ಗುಜರಾತ್ ನ ವಾರಣಾಸಿಯಲ್ಲಿ ಆಚರಿಸಿಕೊಳ್ಳಲಿದ್ದಾರೆ.ಸ್ವಕ್ಷೇತ್ರವಾದ ವಾರಣಾಸಿಯಲ್ಲಿ ಶಾಲಾ ಮಕ್ಕಳೊಂದಿಗೆ ಮೋದಿ ಜನ್ಮದಿನ ಆಚರಣೆ ಮಾಡಲಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ವಾರಣಾಸಿಯಲ್ಲಿ ಭರ್ಜರಿ ಸಿದ್ಧತೆ ಕೈಗೊಳ್ಳಲಾಗಿದೆ.ಇಂದು ಅಪರಾಹ್ನ ವಾರಣಾಸಿಗೆ ಮೋದಿ ಆಗಮಿಸುವ ನಿರೀಕ್ಷೆಯಿದೆ. ಅಷ್ಟೇ ಅಲ್ಲದೆ, ತಾವು ದತ್ತು ಪಡೆದ ಜಯಪುರ, ನಾಗೇಪುರ್ ಮತ್ತು ಕಕ್ರಾಹಿಯಾ ಗ್ರಾಮಗಳಿಗೂ ಪ್ರಧಾನಿ ಭೇಟಿ ನೀಡಲಿದ್ದಾರೆ.