ನವದೆಹಲಿ: ಸಿಂಗಾಪುರ ಪ್ರವಾಸಕ್ಕೆ ತೆರಳಿದ ಪ್ರಧಾನಿ ಮೋದಿ ವಿವಿಧ ಒಡಂಬಡಿಕೆಗಳಿಗೆ ಸಹಿ ಹಾಕುವುದರ ಜತೆಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ನೀವು ಟ್ವಿಟರ್, ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುವುದಕ್ಕೆ ಹೇಗೆ ಸಮಯ ಹೊಂದಿಸುತ್ತೀರಿ ಎಂದು ಪ್ರಶ್ನಿಸಿದ್ದರು.ಇದಕ್ಕೆ ಉತ್ತರಿಸಿದ ಪ್ರಧಾನಿ ಮೋದಿ ನನಗೆ ನಿತ್ಯವೂ ಕಾಯಕ ಮಾಡುವ ಅಮ್ಮ, ಒಬ್ಬ ಸೈನಿಕನೇ ಪ್ರೇರಣೆ. ಅವರೆಲ್ಲಾ ತಮ್ಮ ರಜೆ ಮರೆತು ಕರ್ತವ್ಯ ಮಾಡುತ್ತಿದ್ದರೆ ನನಗೆ ಯಾಕೆ ಸಾಧ್ಯವಿಲ್ಲ ಎನಿಸಿತು.