ವಾಷಿಂಗ್ಟನ್ : ನಸ್ಸೌ ಕೌಂಟಿ ದ್ವೀಪದ ತ್ಯಾಜ್ಯದ ನೀರಿನ ಮಾದರಿಗಳಲ್ಲಿ ವೈರಸ್ ಕಂಡುಬಂದ ನಂತರ ನ್ಯೂಯಾರ್ಕ್ ಪೋಲಿಯೊ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.ನ್ಯೂಯಾರ್ಕ್ನ ಆರೋಗ್ಯ ಇಲಾಖೆಯಲ್ಲಿ ಪೋಲಿಯೊ ಲಸಿಕೆ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಂಡಿದ್ದು, ಲಸಿಕೆ ನಿರ್ವಾಹಕರ ವಿಭಾಗವನ್ನೂ ವಿಸ್ತರಿಸಲು ಯೋಜಿಸಿದೆ. ಅದಕ್ಕಾಗಿ ಆರೋಗ್ಯ ಕಾರ್ಯಕರ್ತರು, ಶುಶ್ರೂಷಕಿಯರು ಹಾಗೂ ಫಾರ್ಮಸಿಸ್ಟ್ ಸೇರಿಸಿಕೊಳ್ಳುವಂತೆ ಗವರ್ನರ್ ಕ್ಯಾಥಿ ಹೊಚುಲ್ ಆದೇಶಿಸಿದ್ದಾರೆ.ಈ ಕುರಿತು ಮಾತನಾಡಿರುವ ಆರೋಗ್ಯ ಇಲಾಖೆ ಆಯುಕ್ತರಾದ ಮೇರಿ ಬ್ಯಾಸೆಟ್, ನಿಮ್ಮ ಮಕ್ಕಳಿಗೆ ಲಸಿಕೆ