ಜೆಡಿಎಸ್ ಪರ ಮಳೆ ಹುಡುಗಿ ಪೂಜಾ ಗಾಂಧಿ ಪ್ರಚಾರ

ಬೆಂಗಳೂರು| jagadish| Last Modified ಸೋಮವಾರ, 30 ಏಪ್ರಿಲ್ 2018 (13:28 IST)
ಮಾಜಿ ಸಚಿವ ಆನಂದ ಅಸ್ನೋಟಿಕರ್ ಪರ ನಟಿ ಪೂಜಾ ಗಾಂಧಿ ಕಾರವಾರ ನಗರದಲ್ಲಿ ಪ್ರಚಾರ ನಡೆಸಿದರು. 
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಿದರು. 
 
ಕಾರವಾರ-ಅಂಕೋಲಾ ಕ್ಷೇತ್ರದ ಅಭಿವೃದ್ಧಿಗಾಗಿ ಆನಂದ ಅಸ್ನೋಟಿಕರ್ ಅವರನ್ನು ಬೆಂಬಲಿಸುವಂತೆ ಕೇಳಿ ಕೊಂಡರು. ಡಾ. ಬಿ‌.ಆರ್. ಅಂಬೇಡ್ಕರ ಸರ್ಕಲ್, ಕಿನ್ನರ, ಅಮದಳ್ಳಿ ಮೊದಲಾದ ಕಡೆಗಳಲ್ಲಿ ಮಳೆ ಹುಡುಗಿ  ಪೂಜಾ ಗಾಂಧಿ ಪ್ರಚಾರ ನಡೆಸಿದರು. ಈ ವೇಳೆ ಹಲವು ಅಭಿಮಾನಿಗಳು ಪೋಟೋ ಕ್ಲಿಕ್ಕಿಸಿಕೊಂಡರು.
 
ಈ ವೇಳೆ ಕುಣಿದು ಕುಣಿದು ಬಾರೇ ಎಂದು ಹಾಡುತ್ತ ಮತದಾರರನ್ನು ಪೂಜಾ ರಂಜಿಸಿ ಗಮನ ಸೆಳೆದರು. 


ಇದರಲ್ಲಿ ಇನ್ನಷ್ಟು ಓದಿ :