ಬೆಂಗಳೂರು : ಬೆಸ್ಕಾಂನಿಂದ ಬೆಂಗಳೂರಿನಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿ ನಡೆಸುತ್ತಿರುವುದರಿಂದ ಸಿಲಿಕಾನ್ ಸಿಟಿಯ ಹಲವು ಏರಿಯಾಗಳಲ್ಲಿ ಇಂದು ಮತ್ತು ನಾಳೆ ಪವರ್ ಕಟ್ ಇರಲಿದೆ. ಬೆಂಗಳೂರಿನಾದ್ಯಂತ ಗುರುವಾರ ಮತ್ತು ಶುಕ್ರವಾರ ನಿರ್ವಹಣೆ ಮತ್ತು ಇತರ ಕೆಲಸಗಳಿಂದಾಗಿ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ತಿಳಿಸಿದೆ.ಬೆಂಗಳೂರಿನ ಬನಶಂಕರಿ, ಜೆ.ಪಿ ನಗರ, ಯಶವಂತಪುರ, ಬಿಇಎಲ್ ಸೇರಿ ಹಲವು ಏರಿಯಾಗಳಲ್ಲಿ ಇಂದು ಬೆಳಗ್ಗೆ 10