ರಾಜ್ಯ ರಾಜಧಾನಿ ಬೆಂಗಳೂರಿನ ಜನರು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹೈರಾಣಾಗಿ ಹೋಗಿದ್ದಾರೆ. ಜೊತೆಗೆ ಚಳಿಗಾಲ ಪ್ರಾರಂಭವಾಗಿರುವುದರಿಂದ ಮಳೆಯ ಜೊತೆಗೆ ಚಳಿಯು ಕೂಡ ಕಾಟ ಕೊಡಲು ಪ್ರಾರಂಭ ಮಾಡಿದೆ. ಇತ್ತ ಮನೆಯಲ್ಲಿ ರುಚಿರುಚಿಯಾದ ಅಡುಗೆ ಮಾಡಿಕೊಂಡು ತಿನ್ನೋಣ ಅಂದ್ರೆ ಬೆಲೆ ಏರಿಕೆಯ ಬಿಸಿ ಶಾಕ್ ನೀಡುತ್ತಿದೆ. ಹೇಗಪ್ಪ ಇದರಿಂದ ರಕ್ಷಣೆ ಮಾಡಿಕೊಳ್ಳುವುದು ಅನ್ನುವ ಆತಂಕದಲ್ಲಿ ಇರುವ ರಾಜಧಾನಿ ಬೆಂಗಳೂರಿನ ಜನರಿಗೆ ಬೆಸ್ಕಾಂ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದು, ಡಿಸೆಂಬರ್ 1 ರಿಂದ