ಬೆಂಗಳೂರು : ಮೆಟ್ರೋ ಪ್ರಯಾಣಿಕರು ಸಂಚಾರ ಮುಗಿಸಿ ನಿಲ್ದಾಣದಿಂದ ಆಚೆ ಬಂದ್ರೆ ಹತ್ತಾರು ಆಟೋಗಳು ಕಾಣುತ್ತವೆ.ಆದರೆ ಕೆಲ ಆಟೋಗಳು ಕರೆದ ಕಡೆ ಬರಲ್ಲ, ಇನ್ನೂ ಕೆಲವರು ಕೇಳಿದ ರೇಟ್ ನೀಡೋಕೆ ಆಗಲ್ಲ. ಈ ಎಲ್ಲಾ ಸಮಸ್ಯೆಗೆ ಕೊನೆ ಕಾಣಿಸಲೇಬೇಕೆಂದು ನಮ್ಮ ಮೆಟ್ರೋ ನಿರ್ಧಾರ ಮಾಡಿದೆ.ಹೀಗಾಗಿ ಮೆಟ್ರೋ ನಿಲ್ದಾಣದಲ್ಲೇ ಪ್ರಿಪೇಯ್ಡ್ ಆಟೋ ಸೇವೆ ಒದಗಿಸಲು ಮುಂದಾಗಿದೆ. ಮೆಟ್ರೊ ನಿಲ್ದಾಣಗಳಿಂದ ಕನಕಪುರ ರಸ್ತೆಯ ಆಸುಪಾಸಿನ ಮನೆಗಳಿಗೆ ಆಟೋ ಚಾಲಕರು ಹೆಚ್ಚಿನ ದರವನ್ನು ಕೇಳುತ್ತಿದ್ದು,