ನಾಯಕನೂರಿನಲ್ಲಿ ದಲಿತರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದ್ದು ಲೋಕಸಭೆ ಮಾಜಿ ಸ್ಪೀಕರ್ ಮೀರಾಕುಮಾರಿಗೆ ವಿನಯ ಕುಲಕರ್ಣಿ ಕುರಿತು ಪರಿಚಯವಿದ್ದರೆ ಅವರು ಕ್ಷೇತ್ರಕ್ಕೆ ಬರುತ್ತಿರಲಿಲ್ಲ ಎಂದು ಬಿಜೆಪಿ ಮುಖಂಡ ಪ್ರಹ್ಲಾದ್ ಜೋಷಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನವರೇ ಸಜ್ಜನ ರಾಜಕಾರಿಗಳನ್ನು ಸರಿಯಾಗಿ ನಡೆಸಿಕೊಂಡಿಲ್ಲ ಅಂತಾ ಧಾರವಾಡ ಉಪ್ಪಿನ ಬೆಟಗೇರಿಯಲ್ಲಿ ಕಾಂಗ್ರೆಸ್ ನ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ನಿಜಲಿಂಗಪ್ಪ , ವೀರೇಂದ್ರ ಪಾಟೀಲ್ ಸೇರಿದಂತೆ ಅನೇಕರನ್ನು ಕಾಂಗ್ರೆಸ್ ಪಕ್ಷದಲ್ಲಿ ತುಳಿಯಲಾಗಿದೆ. ಇನ್ನೊಂದಡೆ ಒಗ್ಗಟ್ಟಾಗಿದ್ದ ಬಹುದೊಡ್ಡ