ಬೆಂಗಳೂರು : ಅಲ್ಲಿ ಬಂತು, ಇಲ್ಲಿ ಹೋಯ್ತು ಎಂಬಂತೆ, ಆಗಸ್ಟ್ ತಿಂಗಳಿಂದ ಇನ್ನೂರು ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಸೇರಿದಂತೆ 5 ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲಿರುವ ಕರ್ನಾಟಕದ ಜನರಿಗೆ ಈ ತಿಂಗಳಿಂದ ಬೇರೆ ಬೆಲೆ ಏರಿಕೆಗಳ ಬಿಸಿ ತಾಕಲಿದೆ. ಆಗಸ್ಟ್ 1ರಿಂದ ಹಾಲು, ತರಕಾರಿ ಇತ್ಯಾದಿ ವಸ್ತುಗಳು ದುಬಾರಿಯಾಗಲಿವೆ. ಕೆಲವೊಂದು ವಲಯದ ಬೆಲೆ ಏರಿಕೆಯು ಬೇರೆ ಬೇರೆ ಕ್ಷೇತ್ರಗಳಲ್ಲಿ ಬೆಲೆ ಏರಿಕೆಗೆ ಪರೋಕ್ಷವಾಗಿ ಎಡೆ ಮಾಡಿಕೊಡುತ್ತದೆ. ಯಾವ್ಯಾವ ವಸ್ತುಗಳು