ಬೆಂಗಳೂರು : ಒಂದೆಡೆ ಆಟೊ ಪ್ರಯಾಣ ದರ ಹೆಚ್ಚಳವಾದರೆ ಇನ್ನೊಂದೆಡೆ ನಗರ ಜನತೆ ಹೆಚ್ಚು ಆಶ್ರಯಿಸುವ ಹೋಟೆಲ್ಗಳ ತಿಂಡಿ ದರದಲ್ಲೂ ಏರಿಕೆ ಕಂಡುಬಂದಿದೆ. ಆದರೆ ಕೆಲವು ಹೋಟೆಲ್ಗಳು ಮಾತ್ರ ದರವನ್ನು ಏರಿಸಿರುವುದು ಸ್ವಲ್ಪ ಮಟ್ಟಿನ ಸಮಾಧಾನವನ್ನು ತಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಟೊರಿಕ್ಷಾ ಪ್ರಯಾಣ ದರವನ್ನು ಕನಿಷ್ಠ 25 ರೂ. ನಿಂದ 30 ರೂ.ಗಳಿಗೆ ಏರಿಕೆ ಮಾಡಿ ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆದೇಶ ಹೊರಡಿಸಿದೆ. ಪರಿಷ್ಕೃತ ದರವು