‘ಪ್ರಧಾನಿ ಮೋದಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರರು, ಯಾಕಂದ್ರೆ ಅವರು ಸತ್ಯವಂತರಲ್ಲ’ ಹೀಗೆ ಹೇಳಿದ್ಯಾರು ಗೊತ್ತಾ?

ನವದೆಹಲಿ| pavithra| Last Modified ಶುಕ್ರವಾರ, 20 ಜುಲೈ 2018 (15:12 IST)
ನವದೆಹಲಿ : ಪ್ರಧಾನಿ ಮೋದಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರರು, ಯಾಕಂದ್ರೆ ಅವರು ಸತ್ಯವಂತರಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.


ಸಂಸತ್ ಕಲಾಪದಲ್ಲಿ ನಡೆಯುತ್ತಿರುವ ಅವಿಶ್ವಾಸ ನಿರ್ಣಯ ಚರ್ಚೆಯ ಸಂದರ್ಭದಲ್ಲಿ ಅವರು ಪ್ರಧಾನಿ ಬಗ್ಗೆ ಈ ರೀತಿಯಾಗಿ ಹೇಳಿದ್ದಾರೆ. ಸಭೆಯಲ್ಲಿ ಪ್ರಧಾನಿ ಮೋದಿಯವರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು,’ ಪ್ರಧಾನಿ ಮೋದಿ ನಗುತ್ತಿರುವುದನ್ನು ನಾನು ನೋಡಿದ್ದೇನೆ. ಆದರೆ ಅವರ ಒಳಗೆ ಭಯದ ಗೆರೆ ಕಾಣಿಸಿದೆ. ಅವರು ನನ್ನ ದೃಷ್ಟಿ ತಪ್ಪಿಸುತ್ತಿದ್ದಾರೆ. ಅವರಿಗೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗುವುದಿಲ್ಲ, ಅದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಯಾಕೆಂದರೆ ಅವರು ಸತ್ಯವಂತರಾಗಿಲ್ಲ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :