ಬೆಂಗಳೂರು : ಭಾರತದ ಅಧ್ಯಕ್ಷತೆಯಲ್ಲಿ ಒಂದು ನೆಲ ಒಂದು ಕುಟುಂಬ, ಒಂದು ಭವಿಷ್ಯ ಎಂಬ ಪರಿಕಲ್ಪನೆಯ ಅಡಿಯಲ್ಲಿ ಮಂಗಳವಾರದಿಂದ ಬೆಂಗಳೂರಿನಲ್ಲಿ ಜಿ 20 ಶೃಂಗಸಭೆ ಆರಂಭವಾಗಲಿದೆ.ಬೆಂಗಳೂರು ಹೊರವಲಯದಲ್ಲಿರುವ ದೇವನಹಳ್ಳಿಯ ಪ್ರೆಸ್ಟಿಜ್ ಗಾಲ್ಪ್ ಶೈರ್ ಜೆಡಬ್ಯ್ಲೂ ಮ್ಯಾರಿಯಟ್ ಹೋಟೆಲ್ನಲ್ಲಿ ಶೃಂಗಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.ಮೂರು ದಿನಗಳ ಕಾಲ ಜಾಗತಿಕ ಮಟ್ಟದ ಸವಾಲುಗಳು, ಅಂತರಾಷ್ಟ್ರೀಯ ಮಟ್ಟದ ಹಣಕಾಸು ಪುನರುಜ್ಜೀವನಗೊಳಿಸುವ ಬಗ್ಗೆ ಚರ್ಚೆಗಳು ನಡೆಯಲಿವೆ. ಯುರೋಪಿಯನ್ ಯೂನಿಯನ್ ದೇಶಗಳಿಂದ ಗಣ್ಯರು ಇಂದು