ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಹಿನ್ನೆಲೆಯಲ್ಲಿ ರಷ್ಯಾ ವಿರುದ್ಧ ಜಾಗತಿಕವಾಗಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ತಮ್ಮ ದೇಶದ ಪರಮಾಣು ನಿರೋಧಕ ಪಡೆಗಳ ಮೇಲೆ ಕಟ್ಟೆಚ್ಚರ ಘೋಷಿಸಿದ್ದಾರೆ.ನ್ಯಾಟೋ ಸದಸ್ಯ ರಾಷ್ಟ್ರಗಳು ರಷ್ಯಾ ವಿರುದ್ಧ ಭಾರಿ ಖಂಡನೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಉನ್ನತಮಟ್ಟದ ಸಭೆ ನಡೆಸಿದ ಪುಟಿನ್, ರಷ್ಯಾ ರಕ್ಷಣಾ ಸಚಿವರು ಹಾಗೂ ಸೇನಾ ಮುಖ್ಯಸ್ಥರು ಪರಮಾಣು ನಿರೋಧಕ ಪಡೆಗಳನ್ನು ವಿಶೇಷ ಕಾರ್ಯಾಚರಣೆ ಪಡೆಗಳನ್ನಾಗಿ ಘೋಷಿಸಿ,ಯಾವುದೇ ಕ್ಷಣದಲ್ಲಿ ಪ್ರತಿರೋಧಕ್ಕೆ ಸಿದ್ಧರಾಗಿರುವಂತೆ