ರಾಯಬಾಗ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಬುಗಿಲೆದ್ದಿದ್ದು, ಜಾರಕಿಹೊಳಿ ಸಹೋದರರ ಬಣಗಳು ತಮ್ಮ ಬೆಂಬಲಿಗರ ಪರವಾಗಿ ಟಿಕೆಟ್ ಫೈಟ್ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಬ್ಬರೂ ರಾಯಬಾಗ್ ಎಸ್ಸಿ ಮೀಸಲು ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಮಹಾವೀರ ಮೊಹಿತೆ, ಸುಕುಮಾರ ಕಿರಣಗಿ ಸತೀಶ ಜಾರಕಿಹೊಳಿ ಬಣದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಬಣದಲ್ಲಿ ಅಪಸ್ವರ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ