ಬೆಂಗಳೂರು: ಸಿದ್ದರಾಮಯ್ಯ ಸರ್ಕಾರವಿದ್ದಾಗ ಚಾಲನೆಗೊಂಡ ಅಗ್ಗದ ದರದ ಇಂದಿರಾ ಕ್ಯಾಂಟೀನ್ ನ ಮೆನುವಿನಲ್ಲಿ ಹೊಸದಾಗಿ ಒಂದು ಐಟಂ ಶುರುವಾಗಲಿದೆ. ಇದುವರೆಗೆ ರೈಸ್ ಬಾತ್, ಪುಳಿಯೋಗರೆ, ಉಪ್ಪಿಟ್ಟು, ಇಡ್ಲಿ, ಮೊಸರನ್ನ ಮುಂತಾದ ತಿಂಡಿ ವಗೈರೆಗಳನ್ನು ಇಂದಿರಾ ಕ್ಯಾಂಟೀನ್ ನಲ್ಲಿ ಸವಿಯಬಹುದಿತ್ತು. ಇನ್ನು ಮುಂದೆ ರಾಗಿ ಮುದ್ದೆಯೂ ಮೆನುವಿಗೆ ಸೇರ್ಪಡೆಯಾಗಲಿದೆ.ಮುದ್ದೆ ಪ್ರಿಯರಿಗೆ ಇದು ಶುಭ ಸುದ್ದಿಯೇ. ಆದರೆ ಈಗಲೇ ಪ್ರಾರಂಭವಾಗಲ್ಲ. ಮುಂದಿನ ತಿಂಗಳಿನಿಂದ ರಾಗಿ ಮುದ್ದೆ ಇಂದಿರಾ ಕ್ಯಾಂಟೀನ್ ಮೆನುವಿಗೆ ಹೊಸದಾಗಿ