ಮೈಸೂರು: ಮೈಸೂರಿನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೊದಲು ಚಾಮುಂಡಿ ಬೆಟ್ಟಕ್ಕೆ ತೆರಳಿ, ನಾಡದೇವತೆಗೆ ಪೂಜೆ ಸಲ್ಲಿಸಿದ್ದಾರೆ.ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಮತ್ತು ಕೆಸಿ ವೇಣುಗೋಪಾಲ್ ಜತೆಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ರಾಹುಲ್ ಗಾಂಧಿ, ಇಲ್ಲಿ ದೇವಾಲಯದ ಆವರಣದಲ್ಲಿರುವ ಗಣಪತಿ ದೇವರಿಗೆ ಪೂಜೆ ಸಲ್ಲಿಸುವಾಗ ಕೊಂಚ ತಡಬಡಾಯಿಸಿದರು.ಆರತಿ ಬಳಿಕ ದಕ್ಷಿಣೆ ಎಲ್ಲಿ ಇಡಬೇಕೆಂದು ಗೊಂದಲಕ್ಕೊಳಗಾದ ರಾಹುಲ್ ತಟ್ಟೆಗೆ ಹಾಕದೇ ಪಕ್ಕದಲ್ಲಿ ಹಾಕಿದ್ದರು.